Home
IN THE NEWS
ದಿನಾಂಕ: 18-12-2009ರಂದು ಮೂಡುಬಿದ್ರೆ ಸಮಾಜ ಮಂದಿರದಲ್ಲಿ KUIDFCಯವರ ವತಿಯಿಂದ ಫೀಡ್ಬ್ಯಾಕ್ ವೆಂಚರ್ರವರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ವಿನಿಯೋಗ ಯೋಜನೆ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.
ಮಾನ್ಯ ಶಾಸಕರಾದ ಶ್ರೀ ಅಭಯಚಂದ್ರ ಜೈನ್ರವರು ಉದ್ಘಾಟಕರಾಗಿ ಆಗಮಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಭೋಜ ಕೋಟ್ಯಾನ್ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಶಿವರಾಜ್ ರೈ, ಪುರಸಭಾ ಉಪಾಧ್ಯಕ್ಷರಾದ ಶ್ರೀ ಕೊರಗಪ್ಪ, ತಹಶೀಲ್ದಾರ್ ಬಾಲಸುಬ್ರಹ್ಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಚಂದ್ರಶೇಖರ್, ಜಿಲ್ಲಾ ಯೋಜನಾ ನಿರ್ದೇಶಕರಾದ ಸಿ.ರಾಮ ಶೆಟ್ಟಿಗಾರ್, ಮುಖ್ಯಾಧಿಕಾರಿ ಎಂ. ಶ್ರೀನಿವಾಸ್, ಫೀಡ್ ಬ್ಯಾಕ್ ವೆಂಚರ್ನ ಕೆ.ಕೆ.ಬೈಜು, ಮಾಜಿ ಅಧ್ಯಕ್ಷರಾದ ಎಚ್. ಪ್ರೇಮಾನಂದ ಪ್ರಭು, ಪುರಸಭಾ ಸದಸ್ಯರಾದ ಕೃಷ್ಣರಾಜ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ನಡವಳಿ - ಹೆಚ್ಚಿನ ಮಾಹಿತಿ - Click here
ಮೂಡುಬಿದ್ರೆ ಪುರಸಭೆಯ ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ವತಿಯಿಂದ ಕರಿಂಜೆ ಗ್ರಾಮದ ಉರ್ಪೆಲ್ ಪಾದೆಯಲ್ಲಿ ನೂತನವಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಯಿತು.
ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಭೋಜ ಕೋಟ್ಯಾನ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊರಗಪ್ಪ ಉಪಾಧ್ಯಕ್ಷರು ಪುರಸಭೆ ಮೂಡುಬಿದ್ರೆ, ಮೇರಿ ಪಿರೇರಾ ಪುರಸಭಾ ಸದಸ್ಯರು, ಕೃಷ್ಣರಾಜ ಹೆಗ್ಡೆ ಪುರಸಭಾ ಸದಸ್ಯರು, ಬಾಹುಬಲಿ ಪ್ರಸಾದ್ ನಿಕಟ ಪೂರ್ವ ಸ್ಥಾಯಿಸಮಿತಿ ಅಧ್ಯಕ್ಷರು, ಎಂ. ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮೂಡುಬಿದ್ರೆ, ಇಂದಿರಾ ಅಧ್ಯಕ್ಷರು ಸಮುದಾಯ ಅಭಿವೃದ್ಧಿ ಸಂಘ, ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನೆ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಮೇರಿ ಪಿರೇರಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ವಂದಿಸಿದರು ಹಾಗೂ ಯೋಜನಾಧಿಕಾರಿ ಕೆಂಪರಾಜು ಕಾರ್ಯಕ್ರಮ ನಿರೂಪಿಸಿದರು.
ಪ್ರಕಟಣೆ -> Click here for the information
Applications are invited for Akrama - Sakrama 2007 in Moodbidri TMC.
TOWN PROFILE
Moodbidri Town Municipal Council was formed in the year 1975 by upgrading the Town Panchayath. The area covered by the TMC is 39.62 Sq.Km. Moodbidri is one of the pilgrimage place and known as Jain Kashi.The Moodbidri town is situated to the north of Mangalore on the NH-13 at a distance of above 36km. from Mangalore. The town lies on both side of the NH -13.
The town has been formed by the combination of 5 villages, viz. Marpady, Pranthya, Kallabettu, Karinje and Marooru. To the north the Marnaadu and Konaje village, to the south Hosabettu and Puchamogaru, to the west Putthige and Belvai, to the east Hosangady and Arambody villages bound the town. Moodbidiri is a town with high humidity and temperature ranging 22 C to 35 C. The rainfall is heavy is about 4000mm per annum in which over 90% is received in the monsoon from June to September.
There are many tourist places in moodbidri. The main tourist spots are Thousand pillar Temple, Ammanavara Basadi, Jain Temple, Guru Basadi, Leppada Basadi, Mahalingeshwara Temple, and Hanuman Temple. Moodbidri town is best known for its educational institutions.
ಮೂಡುಬಿದಿರೆ ಸಮೀಪದ ಕೊಣಾಜೆ ಎಂಬಲ್ಲಿ ಕಂಡು ಬಂದಿದ್ದ ಕಬ್ಬಿಣಯುಗದ ಅವಶೇಷಗಳು ಕ್ರಿ.ಪೂ. 800ರಷ್ಟು ಪೂರ್ವದಲ್ಲೇ ಇಲ್ಲಿ ಜನ ವಸತಿ ಇತ್ತೆಂಬುದಕ್ಕೆ ಆಧಾರವಾಗಿದೆ. ಮೂಡುಬಿದಿರೆಯಲ್ಲಿ ದೊರಕಿದ ಕ್ರಿ.ಶ. 1205ರ ಶಾಸನದಲ್ಲಿ ಈ ಪ್ರದೇಶವನ್ನು ಬಿದಿರೆ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಮೂಡುಬಿದಿರೆ ಎಂಬ ಹೆಸರಿನ ಪ್ರಥಮ ಉಲ್ಲೇಖ ಕ್ರಿ.ಶ. 1396ರ ಶಾಸನದಲ್ಲಿ ದೊರಕುತ್ತದೆ. 15ನೇ ಶತಮಾನದ ಶಾಸನಗಳಲ್ಲಿ ಇದನ್ನು 'ವೇಣುಪುರ', 'ವಂಶಪುರ' ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಬಿದಿರೆ, ವೇಣು, ವಂಶ ಎಂಬ ಹೆಸರಿಗೆ ಈ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಬಿದಿರು ಮೂಲವಾಗಿತ್ತು. ಪಶ್ಚಿಮ(ಪಡು) ಭಾಗದಲ್ಲಿ ಇನ್ನೊಂದು ಬಿದಿರೆ ಇದ್ದುದರಿಂದ ಆ ಪ್ರದೇಶ ಪಡು ಬಿದಿರೆಯಾಗಿ ಪೂರ್ವಕ್ಕೆ(ಮೂಡು) ಇರುವ ಬಿದಿರೆ ಮೂಡುಬಿದಿರೆಯಾಗಿರಬೇಕು. ಕ್ರಿ.ಶ. 15-16ನೇ ಶತಮಾನದಲ್ಲಿ ಮೂಡುಬಿದಿರೆ ಒಂದು ಭವ್ಯ ನಗರವಾಗಿತ್ತು. "ತುಳುನಾಡಿಗೆ ವಿಶಿಷ್ಠಮಪ್ಪ ನಗರ" ಎಂದು ಶಾಸನ ಕವಿಗಳಿಂದ ಹೊಗಳಿಕೆಗೆ ಒಳಗಾಗಿತ್ತು. ಮೂಡುಬಿದಿರೆಯನ್ನು ಕವಿಗಳ ಆಶ್ರಯ ತಾಣ, ಜಿನಾಲಯಗಳಿಂದಲೂ, ಹೂದೋಟ, ಕೆರೆ ಸರೋವರಗಳಿಂದೊಪ್ಪುವ ಸುಂದರ ತಾಣ, ಭತ್ತ ಕಬ್ಬಿನ ಹೊಲಗಳಿಂದ ಸುತ್ತುವರಿದ ಸಮೃದ್ಧಿಯ ಕ್ಷೇತ್ರ ಮಾತ್ರವಲ್ಲ, ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತೆಂದು ಶಾಸನಗಳು ತಿಳಿಸುತ್ತವೆ. ಇಲ್ಲಿಂದ ಭತ್ತ, ಅಕ್ಕಿ, ಕರಿಮೆಣಸು,ಚಿನ್ನ, ಬೆಳ್ಳಿ ವಜ್ರದ ಆಭರಣಗಳು ರಫ್ತು ಆಗುತ್ತಿದ್ದುವು. ಸಾವಿರ ಕಂಬದ ಬಸದಿಯಲ್ಲಿರುವ ಚೀನಾದ 'ಚೈನೀಸ್ ಡ್ರಾಗನ್' ಎಂಬ ಕಾಲ್ಪನಿಕ ಪ್ರಾಣಿಯ ಕೆತ್ತನೆ ಶಿಲ್ಪವು ಮೂಡುಬಿದಿರೆಗೆ ಪೂರ್ವ ಹಾಗೂ ಪಶ್ಚಿಮ ದೇಶಗಳ ಸಂಪರ್ಕ 15ನೇ ಶತಮಾನದಲ್ಲಿ ಇತ್ತೆಂಬುದನ್ನು ತೋರಿಸುತ್ತದೆ.
ಮೂಡುಬಿದಿರೆಯನ್ನು 'ಜೈನಕಾಶಿ' ಎಂಬ ವಿಶೇಷಣದಿಂದ ಕರೆಯಲು ಕಾರಣ ಇಲ್ಲಿನ 18 ಜಿನಾಲಯಗಳು. ಇವುಗಳನ್ನು ಬಸದಿಗಳೆಂದು ಕರೆಯಲಾಗುತ್ತದೆ. ಉತ್ತರ ಭಾರತದಿಂದ ಸಾವಿರಾರು ಯಾತ್ರಿಕರು ಪ್ರತಿ ವರ್ಷ ಮೂಡುಬಿದಿರೆ ಜಿನಾಲಯಗಳಿಗೆ ಸಂದರ್ಶನ ನೀಡುತ್ತಾರೆ.
This Page is maintained by Chief Officer, TMC Moodbidri.




